Posts

Showing posts from May, 2023

ಜ್ಞಾನನಿಧಿ ಪ್ರೊ|| ಮಲ್ಲಿನಾಥ್ ಕುಂಬಾರ್

Image
      ಬಹಳ ದಿನದ ನಂತರ ಕನ್ನಡದಲ್ಲಿ ಬರೆಯಲು ಒಂದು ಅವಕಾಶ. ಡಾಕ್ಟರ್ ಮಲ್ಲಿನಾಥ್ ಕುಂಬಾರರ ಅಭಿನಂದನಾ ಗ್ರಂಥಕ್ಕೆ ನನ್ನ ಮತ್ತು ಅವರ ಒಡನಾಟದ ಕೆಲವು ತುಣುಕುಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟ ನನ್ನ ಗುರುಗಳಾದ ಡಾ. ಹರಿನಾರಾಯಣ್ ರವರಿಗೆ ವಂದನೆ. ಈ ಒಂದು ಪ್ರಯತ್ನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿ ಅನ್ನಿಸುತ್ತಿದೆ. ಜ್ಞಾನನಿಧಿ ಪ್ರೊ|| ಮಲ್ಲಿನಾಥ್ ಕುಂಬಾರ್ ಪ್ರಾಧ್ಯಾಪಕರಾದ ಡಾ|| ಮಲ್ಲಿನಾಥ್ ಕುಂಬಾರ್ ಅವರ ಗೌರವಾರ್ಥ ಹೊರತರಲಿರುವ ಸಂಚಿಕೆಗಾಗಿ ಈ ಲೇಖನವನ್ನು ಬರೆಯಲು ದೊರೆತಿರುವ ಈ ಅವಕಾಶವು ಅತಿ ಅಮೂಲ್ಯವಾದದ್ದು ಎಂದು ಹೇಳಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ. ಇವರು ತಮ್ಮ ಸುಧೀರ್ಘವೃತ್ತಿ ಜೀವನದ ಸಾರ್ಥಕ ಸೇವೆಯ ನಂತರ ನಿವೃತ್ತರಾಗುತ್ತಿರುವ ಈ ಸಂದರ್ಭದಲ್ಲಿ ಅವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ಸಂಶೋಧನೆಯ ಮೂಲಕ ನೀಡಿರುವ ಲೇಖನಗಳು, ಕಾರ್ಯಕ್ಷಮತೆ, ಬದ್ಧತೆ, ಕಾರ್ಯ ವಿಧಾನಗಳು ಹಾಗೂ ನೀತಿಗಳ ಅನುಸರಣೆ, ವಿಚಾರಣಾ ಮನೋಧರ್ಮ, ವಿದ್ಯಾರ್ಥಿ ಸ್ನೇಹ ವ್ಯಕ್ತಿತ್ವ, ಇವು ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ. ಇದನ್ನು ವಿಸೃತವಾಗಿ ಹೇಳುವುದಾದರೆ ಪ್ರೊಫೆಸರ್ ಮಲ್ಲಿನಾಥ್ ಕುಂಬಾರರು ತಮ್ಮ ವೃತ್ತಿಜೀವನದುದ್ದಕ್ಕೂ ತಮ್ಮ ಆಡಳಿತ ಕೌಶಲ್ಯ, ಕಾರ್ಯೋನ್ಮುಖತೆ, ಹಾಗೂ ಕ್ರಮಬದ್ಧವಾದ ಕಾರ್ಯನಿರ್ವಹಣೆಯಿಂದ ಜನಪ್ರಿಯರಾಗಿದ್ದಾರೆ. Department of Studies in Library & Informatio